ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…
ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು…

ಇದು ಡಾ. ರಾಜ್‌ಕುಮಾರ್ ಹಾಡಿದ ಸುಪ್ರಸಿದ್ಧ ಹಾಡು, ಇದು ಈಗ ವಿಶ್ವದಾದ್ಯಂತ ಕನ್ನಡಿಗರಿಗೆ ಮತ್ತು ಈಗ ಕರ್ನಾಟಕದಲ್ಲಿ ನೆಲೆಸಿರುವ ಪರಭಾಷಿಕರಿಗೆ ಒಂದು ಸ್ತುತಿಗೀತೆಯಾಗಿದೆ.  ಕರ್ನಾಟಕ ಒಲವು ತೋರುವ ಪ್ರತಿಯೊಬ್ಬರನ್ನು ಆಪ್ಯಾಯತೆಯಿಂದ ಸ್ವಾಗತಿಸುವ ನಾಡು. ಕನ್ನಡಿಗರು ಅನುರಾಗಪೂರ್ಣ, ಉದಾರ ಮನಸ್ಸಿನ, ಮಾನವೀಯತೆಗೆ  ಪ್ರಾಶಸ್ತ್ಯ ನೀಡುವ, ಸಂತೋಷವನ್ನು     ಹಂಚಿಕೊಂಡರೆ ಅದು ಹೆಚ್ಚುತ್ತದೆ ಎಂದು ನಂಬಿರುವ ಜನರು.

ಅದ್ಭುತ ವಾತಾವರಣದೊಂದಿಗೆ,ಕನ್ನಡಿಗರ ಆದರದಿಂದ ಸ್ವಾಗತಿಸುವ ಸ್ವಭಾವ ಈ ಮಣ್ಣಿನಲ್ಲಿ ನಡೆದಾಡಲು ಆಶೀರ್ವಾದ ಪಡೆದವರ ಸಂತೋಷವನ್ನು ಹೆಚ್ಚಿಸುತ್ತದೆ.  ಪರಭಾಷಿಕರು ಇಲ್ಲಿನ ಜನ,ಸಂಸ್ಕೃತಿ,ಭೂಮಿ,ತಿನಿಸು ಮತ್ತು ಭಾಷೆಯನ್ನು ಉತ್ಸಾಹದಿಂದ ಸ್ವೀಕರಿಸುತ್ತಾರೆ.

ಪ್ರತಿ ಬಾರಿಯೂ ಪರಭಾಷಿಕರು ಕನ್ನಡ ಮಾತನಾಡುವಾಗ,ಅಪ್ರತಿಮ ವಾತ್ಸಲ್ಯ ಮತ್ತು ಗೌರವ ಸಿಗುವುದು ಖಚಿತ. ಹೀಗಿದ್ದಾಗ,ಬಹಳಷ್ಟು ಪರಭಾಷಿಕರು ಕನ್ನಡಿಗರ ಹೃದಯವನ್ನು ಮುಟ್ಟಲು ಕನ್ನಡವನ್ನು ಕಲಿಯಲು ಹಂಬಲಿಸುತ್ತಿದ್ದಾರೆ. ಉತ್ಸಾಹದಿಂದ ಹೆಚ್ಚು ಜನರು ಕನ್ನಡವನ್ನು ಕಲಿಯುವುದು ಈ ಆಪ್ನ ಉದ್ದೇಶ. ಅದರೊಂದಿಗೆ ಅರ್ಥಪೂರ್ಣವಾಗಿ ಉತ್ತರಿಸುವ ಸಮರ್ಥರಾಗುವಂತೆ ಮಾಡುವುದು ಈ ಆಪ್ನ  ಗುರಿ.ಕನ್ನಡವನ್ನು   ಸುಲಭವಾಗಿ, ಪರಿಣಾಮಕಾರಿ ಮತ್ತು ಆನಂದದಾಯಕ ರೀತಿಯಲ್ಲಿ ಹರಡಲು ಡಾ. ರಾಜ್ಕುಮಾರ್ ಕಲಿಕಾ ಆಪ್ ಈ ಪೋರ್ಟಲ್ ಮೂಲಕ ಕನ್ನಡ ಕಲಿ ವಿನಮ್ರತೆಯಿಂದ ಪ್ರಸ್ತುತಪಡಿಸುತ್ತಿದೆ.

ಕನ್ನಡ ಭಾಷೆಯ ರಚನೆಯು ಇತರ ಎಲ್ಲ ಭಾರತೀಯ ಭಾಷೆಗಳಿಗೆ ಹೋಲುತ್ತದೆ ಮತ್ತು ವೇಗವಾಗಿ ಕಲಿಯಬಹುದು. ಕನ್ನಡ ಕಲಿಮಾದರಿಯು ಕನ್ನಡವನ್ನು ಅಂತಾರಾಷ್ಟ್ರೀಯವಾಗಿ   ಅಂಗೀಕರಿಸಿದ ರೂಪದಲ್ಲಿ ಭಾಷೆಯ ಅಕ್ಷರಗಳಿಂದ ಆರಂಭಿಸಿ, ನಂತರ ಭಾಷೆಯ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ದಿನನಿತ್ಯದ ಕನ್ನಡ ಬಳಕೆಯ ಮೂಲಭೂತ   ಅಂಶಗಳೊಂದಿಗೆ  ಮಾತನಾಡುವ ಸಾಮರ್ಥ್ಯದ ಮೇಲೆ ಗಮನವಿಟ್ಟು ರೂಪಿಸಲಾಗಿದೆ.

ಸುಲಭವಾಗಿ ಅರ್ಥಮಾಡಿಕೊಳ್ಳುವ ವ್ಯಾಖ್ಯಾನಗಳು,ಪರಿಕಲ್ಪನೆಯ ಚಿತ್ರಾತ್ಮಕ ಪ್ರಾತಿನಿಧ್ಯಗಳೊಂದಿಗೆ ಇಂಗ್ಲೀಷ್ ಪದದ ಮೂರು ಹಂತದ ಅನುವಾದದೊಂದಿಗೆ ಸಂಪೂರ್ಣ ತಿಳುವಳಿಕೆ ಮತ್ತು ಸ್ಪಷ್ಟತೆಗಾಗಿ ಕನ್ನಡ ಪದದ ಕನ್ನಡ ಮತ್ತು ಇಂಗ್ಲೀಷ್ ಲಿಪಿಯಲ್ಲಿ ಅನುವಾದಿಸಲಾಗಿದೆ.

ಆಪ್ ಪರಭಾಷಿಕರಿಗೆ ಕನ್ನಡದಲ್ಲಿ ಮೂಲಭೂತ ಪ್ರಾವೀಣ್ಯತೆಯನ್ನು ಸಾಧಿಸಲು ವೇದಿಕೆಯಾಗಿಸಲು ಮತ್ತು ಯಾವುದೇ ಸಂಭಾಷಣೆಯನ್ನು ಹೀಗೆ ಆರಂಭಿಸಲು ಸಾಧ್ಯವಾಗುವಂತೆ   ಮಾಡಲು ಆಶಿಸುತ್ತದೆ:ದಯವಿಟ್ಟು ನನ್ನೊಂದಿಗೆ ಕನ್ನಡದಲ್ಲಿ ಮಾತನಾಡಿ! ನನಗೇ ಕನ್ನಡ ಗೊತ್ತಿದೆ!