Quality Education

STARTS HERE

ನಮ್ಮ ಬಗ್ಗೆ ವಿಚಾರ ಮತ್ತು ನಾವು ಹೇಗೆ ಆರಂಭಿಸಿದೆವು :

ನಾವು ಒಂದು ಉದ್ದೇಶಕ್ಕಾಗಿ ಒಗ್ಗೂಡಿದ್ದೇವೆ. ಭವಿಷ್ಯದಲ್ಲಿ ಕಲಿಕೆಯಲ್ಲಿ ಕ್ರಾಂತಿ ಮಾಡುವ ಉದ್ದೇಶ. ಸಮಾಜದ ಮೇಲೆ ಪ್ರಭಾವ ಬೀರುವ ಉದ್ದೇಶ.
ನಾವು ನಮ್ಮ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ವೃತ್ತಿ ಜೀವನದಲ್ಲಿ ಮತ್ತಷ್ಟು ಮುಂದೆ ತಲುಪಲು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಸಿಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಪ್ರಪಂಚವು ಕಲಿಯುವ ವಿಧಾನದಲ್ಲಿ ಬದಲಾವಣೆ ತರುತ್ತೇವೆ ಎಂದು ನಮ್ಮ ನಂಬಿಕೆ.
ಶಿಕ್ಷಣ ಜನ್ಮಸಿದ್ಧ ಹಕ್ಕಾಗಿದೆ ಮತ್ತು ಕಲಿಕೆಯನ್ನು ಅತ್ಯಂತ ಗುಣಮಟ್ಟದ, ಕೈಗೆಟುಕುವ ಮತ್ತು ಸಂವಾದನಾತ್ಮಕ  ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ನಮ್ಮ ಗುರಿ.
ಕಳೆದ ವರ್ಷದಲ್ಲಿ, ನಾವು ಕಲಿಕೆಯ ಭವಿಷ್ಯವನ್ನು ಅಧ್ಯಯನ ಹಾಗೂ  ಪಾರುಪತ್ಯ ಮಾಡಿದ್ದೀವಿ. ಇಂದು ನಾವು ಆನ್‌ಲೈನ್ ಲರ್ನಿಂಗ್ ಆ್ಯಪ್ಅನ್ನು ಪ್ರಾರಂಭಿಸುವ ಹಾಗೂ  ಹೆಚ್ಚಿನ ಕಲಿಕಾ ಕ್ಷೇತ್ರಗಳಿಗೆ ವಿಸ್ತರಿಸುವ ಮೂಲಕ ನಮ್ಮ ಆನ್‌ಲೈನ್ ಉಪಸ್ಥಿತಿಯನ್ನು ಸ್ಥಾಪಿಸುತ್ತಿದ್ದೇವೆ. ನಾವು ಅತ್ಯುತ್ತಮರೊಂದಿಗೆ ಮಾತ್ರ ಕೆಲಸ ಮಾಡಲು ಬದ್ಧರಾಗಿದ್ದೇವೆ.
ಜೀವನವನ್ನು ಬದಲಾಯಿಸುವ ಮತ್ತು ನಮ್ಮ ದೇಶ ಮತ್ತು ಅದರ ಜನರ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡುವ ಈ ಪ್ರಯಾಣವನ್ನು ಆರಂಭಿಸೋಣ.

ದೃಷ್ಟಿ ಹೇಳಿಕೆ :

ಡಾ. ರಾಜ್‌ಕುಮಾರ್ ಲರ್ನಿಂಗ್ ಆ್ಯಪ್ ಸಂಶೋಧನೆ ಆಧಾರಿತ ಆನ್ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಗುಣಮಟ್ಟದ ಕಲಿಕೆಯನ್ನು ಕೈಗೆಟುಕುವಂತೆ ಮತ್ತು ಲಭ್ಯವಾಗುವಂತೆ ಮಾಡಲು ಇಲ್ಲಿದೆ.
ಹಣಕಾಸಿನ ಅಥವಾ ಮೂಲಸೌಕರ್ಯದ ನಿರ್ಬಂಧಗಳಿಂದಾಗಿ ಯಾರಿಗೂ ಕಲಿಕೆಯನ್ನು ನಿರಾಕರಿಸಬಾರದು ಎನ್ನುವುದು ನಮ್ಮ ದೃಢನಂಬಿಕೆ. ನಮ್ಮ ವಿಧಾನವು ಆಕಾಂಕ್ಷಿಗಳು, ಕುಟುಂಬಗಳು ಮತ್ತು ಸಮುದಾಯಗಳು ಅಭಿವೃದ್ಧಿ ಹೊಂದಲು ಸಹಾಯ ಮಾಡಲು ತರಗತಿಯ ಆಚೆಗೆ ವಿಸ್ತರಿಸುತ್ತದೆ.
ಎಲ್ಲಾ ಆಕಾಂಕ್ಷಿಗಳು ತಮ್ಮ ಕನಸನ್ನು ಸಾಧಿಸಲು ಮತ್ತು ಅವರ ಜೀವನದಲ್ಲಿ ಮತ್ತಷ್ಟು ಮುನ್ನಡೆಯಲು ಸಮಾನ ಅವಕಾಶದೊಂದಿಗೆ ಜೀವಿಸುವವರೆಗೂ ನಾವು ನಿಲ್ಲುವುದಿಲ್ಲ.
ನಮ್ಮ ಭವಿಷ್ಯ ಇದನ್ನು ಅವಲಂಭಿಸಿದೆ!

ಮಿಷನ್ ಹೇಳಿಕೆ :

ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶಿಸಬಹುದಾದ ಮತ್ತು ಕೈಗೆಟುಕುವಂತ ಕಲಿಕೆಯ ವೇದಿಕೆಯನ್ನು ಸೃಷ್ಟಿಸಲು.
ನಮ್ಮ ಕಲಿಕಾ ಆ್ಯಪ್ ಹೆಚ್ಚಿನ ಕೋರ್ಸ್‌ಗಳನ್ನು ಸೇರಿಸುವುದನ್ನು ಮುಂದುವರಿಸುವ ಮೂಲಕ ಆಕಾಂಕ್ಷಿಗಳು ತಮ್ಮ ಜೀವನೋಪಾಯವನ್ನು ಸೃಷ್ಟಿಸಿಕೊಳ್ಳಲು ಸಹಾಯ ಮಾಡಲು.
ಶಿಕ್ಷಣ ವೃತ್ತಿಪರರಿಗೆ ಅವಕಾಶಗಳನ್ನು ಒದಗಿಸುವುದು ಕಲಿಕೆಯ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹೆಚ್ಚಿನ ಮಾರ್ಗಗಳನ್ನು ಆವಿಷ್ಕರಿಸಲು.
ನಮ್ಮ ಚಂದಾದಾರರಿಗೆ ಜೀವನದಲ್ಲಿ ಮತ್ತಷ್ಟು ಮುಂದೆ ತಲುಪಲು ಸಹಾಯ ಮಾಡಲು!
ಸ್ಥಳೀಯರಿಗಾಗಿ ಧ್ವನಿಯಾಗಲು!

ನಮ್ಮ ಸಂಸ್ಥೆಯ ಮೌಲ್ಯಗಳು:

ಪ್ರಾಮಾಣಿಕ ಮತ್ತು ಸರಳ: ಎಲ್ಲರಿಗೂ ಲಭ್ಯವಾಗುವಂತೆ ಮಾಡಲು. ಬ್ರ್ಯಾಂಡ್ ಆಗಿ, ನಾವು ಮಾಡುವ ಎಲ್ಲದರಲ್ಲೂ ಪ್ರಾಮಾಣಿಕರಾಗುವ ಮೂಲಕ ನಾವು ಇದನ್ನು ಮಾಡುತ್ತೇವೆ. ನಮ್ಮ ವಿಧಾನದಲ್ಲಿ ನಾವು ವೈಯಕ್ತಿಕ ಮತ್ತು ಸ್ನೇಹಪರರಾಗಿದ್ದೇವೆ ಮತ್ತು ಯಾವಾಗಲೂ ಸಹಾಯ ಮಾಡಲು ಪ್ರಯತ್ನಿಸುತ್ತೇವೆ.
ನಿರಂತರವಾದ ಕಲಿಕೆ: ನಮ್ಮ ಕಲಿಕಾ ಗ್ರಂಥಾಲಯದಲ್ಲಿ ನಿಲುಗಡೆ ಇಲ್ಲ, ಮತ್ತು ಇದು ನಮ್ಮ ಬ್ರ್ಯಾಂಡ್ಗೂ ಅನ್ವಯಿಸುತ್ತದೆ. ನಾವು ಸಮರ್ಪಿತ, ಚುರುಕು ಮತ್ತು ಉತ್ಸಾಹಭರಿತರಾಗಿದ್ದೇವೆ. ನಾವು ನಮ್ಮ ಗ್ರಾಹಕರೊಂದಿಗೆ ವಿಶ್ವಾಸದಿಂದ ಮಾತನಾಡುತ್ತೇವೆ ಮತ್ತು ಕಲಿಕೆಯನ್ನು ನಿಲ್ಲಿಸಬಾರದೆಂದು ನಂಬುತ್ತೇವೆ.
ಉತ್ಸಾಹಭರಿತ: ಇದೇ ನಮ್ಮ ಅಸ್ತಿತ್ವ, ಕೇವಲ ಪ್ರಕಟವಾಗುವ ರೀತಿಯಲ್ಲಿ ಅಲ್ಲ. ಹೌದು, ಕಲಿಕೆಗೆ ಅನುಕೂಲವಾಗುವಂತೆ ನಮ್ಮಲ್ಲಿ ಸಾಕಷ್ಟು ಕೋರ್ಸ್‌ಗಳು, ಮಾರ್ಗದರ್ಶನ ಮತ್ತು ಮೌಲ್ಯಮಾಪನಗಳಿವೆ, ಆದರೆ ನಮ್ಮ ನಿಜ ಉದ್ದೇಶ ನಮ್ಮೊಂದಿಗೆ ಸಂವಹನ ಮಾಡುವ ಪ್ರತಿಯೊಬ್ಬರಲ್ಲೂ ನಿರಂತರ ಸುಧಾರಣೆಯ ಉತ್ಸಾಹವನ್ನು ಪ್ರೇರೇಪಿಸುವುದಾಗಿದೆ.