ಎಲ್ಲಿಯಾದರೂ, ಯಾವ ಸಮಯದಲ್ಲಾದರೂ ಕಲಿಯುವುದನ್ನು ನಾವು ನಂಬುತ್ತೇವೆ. ಈ ಸಂಸ್ಥೆಯಲ್ಲಿ ಪ್ರತಿಯೊಬ್ಬರೂ ಜ್ಞಾನದ ವಿದ್ಯಾರ್ಥಿಗಳು. ನಾವು ಮಾಡುವ ಎಲ್ಲಾ ಕೆಲಸದಲ್ಲಿ ಪರಸ್ಪರ ಕಲಿಯುತ್ತೇವೆ. ನಿರಂತರವಾಗಿ ಹೊಸತನವನ್ನು ನೀಡುತ್ತಾ, ಉತ್ತಮವಾದ ನಾಳೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಶಿಕ್ಷಣವನ್ನು ಎಲ್ಲರಿಗೂ ತಲುಪುವಂತೆ ಮಾಡುವುದು ನಮ್ಮ ಗುರಿಯಾಗಿದೆ. ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಪ್ರತಿ ವಿದ್ಯಾರ್ಥಿಯು ತಮ್ಮ ಕಲಿಕಾ ಅನುಭವವನ್ನು ಹೆಚ್ಚಿಸಿಕೊಳ್ಳುವ ತಮ್ಮ ಜನ್ಮಸಿದ್ಧ ಹಕ್ಕನ್ನು ಚಲಾಯಿಸಬೇಕೆಂದು ನಾವು ಬಯಸುತ್ತೇವೆ. ಶಿಕ್ಷಣವನ್ನು ಎಲ್ಲೆಡೆ ತಲುಪುವಂತೆ ಮತ್ತು ವಿದ್ಯಾರ್ಥಿಗಳು ಮತ್ತಷ್ಟು ಮುಂದೆಸಾಗಲು ಸಹಾಯ ಮಾಡುವುದಕ್ಕೆ ನಾವು ಇಲ್ಲಿದ್ದೇವೆ.
ಡಾ. ರಾಜ್‌ಕುಮಾರ್ ಲರ್ನಿಂಗ್ ಆ್ಯಪ್ ತಂಡವನ್ನು ಸೇರಿಕೊಳ್ಳಿ, ಜೊತೆಯಾಗಿ ಮತ್ತಷ್ಟು ಪ್ರಗತಿ ಸಾದಿಸೋಣ!