PSI-Wireless

ಪೊಲೀಸ್ ಸಬ್‌ ಇನ್ಸ್ಪೆಕ್ಟರ್‌ (ವೈರ್‌ ಲೆಸ್) ನ ಪರಿಚಯ

ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌ (ವೈರ್ ಲೆಸ್) ಎಂಬುದು ಪಿ.ಎಸ್.ಐ‌ (ಸಿವಿಲ್) ಗೆ ಸಮನಾಂತರ ಹುದ್ದೆಯಾಗಿದ್ದು, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ತಾಂತ್ರಿಕ ಮತ್ತು ಮಾಹಿತ ತಂತ್ರಜ್ಞಾನ ವಿಭಾಗದಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ‌
  • ಇಡೀ ರಾಜ್ಯದಲ್ಲಿ ಪೊಲೀಸ್ ವೈರ್‌ಲೆಸ್ ಸಂವಹನ ಮತ್ತು ರಹಸ್ಯ ಸೈಫರ್ ಸಂವಹನವನ್ನು ಸ್ಥಾಪಿಸುವುದು.
  • ಸ್ಟ್ಯಾಟಿಕ್ ಮತ್ತು ಮೊಬೈಲ್ ವೈರ್‌ಲೆಸ್ ರೇಡಿಯೊ ಸಂವಹನ ಸೆಟಪ್‌ನ ನಿರ್ವಹಣೆ ಮತ್ತು ಸ್ಥಾಪನೆ.
  • ವೈರ್‌ಲೆಸ್ ಉಪಕರಣಗಳ ದುರಸ್ತಿ ಮತ್ತು ನಿರ್ವಹಣೆ.
  • ಆಧುನಿಕ ಸಂವಹನ ಸಲಕರಣೆಗಳ ಖರೀದಿ.
  • ಸಂವಹನ ಜಾಲಗಳ ಮೇಲ್ವಿಚಾರಣೆ ಮತ್ತು ಭರವಸೆ.
  • ನಗರ/ಜಿಲ್ಲೆ/ಘಟಕಗಳಲ್ಲಿ ವೈರ್‌ಲೆಸ್ ವಿಭಾಗದ ತಪಾಸಣೆ.
  • ವಿವಿಐಪಿ ಬಂದೋಬಸ್ತ್‌ಗಾಗಿ ಡಿಎಫ್‌ಎಂಡಿ/ಎಚ್‌ಎಚ್‌ಎಂಡಿ ವಿತರಣೆ, ನಿರ್ವಹಣೆ ಮತ್ತು ಸ್ಥಾಪನೆ.
ಇವೆಲ್ಲವು ಸಹ ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌ (ವೈರ್ ಲೆಸ್))  ಕರ್ತವ್ಯಗಳಡಿ ಬರುತ್ತವೆ. ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌(ವೈರ್ ಲೆಸ್)  ,ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿದೆ, ಅವರಿಗೆ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಇನ್ಸ್‌ಪೆಕ್ಟರ್ ಜನರಲ್ ಮತ್ತು ಇಬ್ಬರು ಉಪ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೋಲೀಸ್ ಸಹಾಯ ಮಾಡುತ್ತಾರೆ. ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯು ರಾಜ್ಯಕ್ಕೆ ಕಾನೂನು ಜಾರಿ ಸಂಸ್ಥೆಯಾಗಿದೆ. ಇಲಾಖೆಯು ಡೈರೆಕ್ಟರ್‌ ಜನರಲ್‌ ಮತ್ತು ಇನ್ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ನೇತೃತ್ವದಲ್ಲಿದೆ. ಕರ್ನಾಟಕದ ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌(ವೈರ್ ಲೆಸ್)  ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕರ್ನಾಟಕದ ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌(ವೈರ್ ಲೆಸ್) ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಅದರಂತೆಯೇ ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯು  ಕರ್ನಾಟಕದ ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌(ವೈರ್ ಲೆಸ್) ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಗಳನ್ನು ನಡೆಸುತ್ತದೆ. ನೇಮಕಾತಿಯು ಪಾರದರ್ಶಕವಾಗಿದ್ದು ನಿಮ್ಮ ಅಂಕಗಳೇ ಅಂತಿಮ ಆಯ್ಕೆಯ ಮಾನದಂಡವಾಗಿರುತ್ತದೆ. ಅತಿ ವೇಗವಾಗಿ ಆಯ್ಕೆ ಪ್ರಕ್ರಿಯೆ ನಡೆಸುವ ಏಕೈಕ ಇಲಾಖೆಯೆಂದರೆ ಅದು ಪೊಲೀಸ್‌ ಇಲಾಖೆ ಮಾತ್ರ. ಪೊಲೀಸ್‌ ಇಲಾಖೆಯು ಕಾನೂನು ಮತ್ತು ಸುವ್ಯವಸ್ಥೆಯ ಅಡಿಯಲ್ಲಿ ಬರುವುದರಿಂದ ಸಾಮಾನ್ಯವಾಗಿ   ಕರ್ನಾಟಕದ ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌(ವೈರ್ ಲೆಸ್) ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ಆಗಿಂದಾಗ್ಗೆ ನಡೆಯುತ್ತಲಿರುತ್ತವೆ. ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯು ಅರ್ಹ ಮತ್ತು ಆಸಕ್ತ ಕಾಲ ಕಾಲಕ್ಕೆ ಕರ್ನಾಟಕದ ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌(ವೈರ್ ಲೆಸ್)  ಹುದ್ದೆಗಳ ನೇಮಕಾತಿಗಾಗಿ ಆನ್‌ ಲೈನ್‌ ಅರ್ಜಿಯನ್ನು ಆಹ್ವಾನಿಸುತ್ತದೆ.

ಪೊಲೀಸ್ ಸಬ್‌ ಇನ್ಸ್ಪೆಕ್ಟರ್‌ (ವೈರ್‌ ಲೆಸ್) ನ ನೇಮಕಾತಿ ಹಂತಗಳು

ಈ ಹುದ್ದೆಗಳ ನೇಮಕಾತಿಯಲ್ಲಿ ಎರಡು ಹಂತಗಳಿವೆ.
  1. ದೈಹಿಕ ಪರೀಕ್ಷೆ ( ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ )
  2. ಲಿಖಿತ ಪರೀಕ್ಷೆ
ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌ (ವೈರ್ ಲೆಸ್) ಆಗಿ ಆಯ್ಕೆಯಾಗಲು ಈ ಎಲ್ಲಾ ಹಂತಗಳಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಯು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಲಿಖಿತ ಪರೀಕ್ಷೆಗೆ ಅರ್ಹನಾಗುತ್ತಾನೆ.

1. ಸಹಿಷ್ಣುತೆ ಪರೀಕ್ಷೆ

 
  • ದೇಹದಾರ್ಢ್ಯತೆ ಪರೀಕ್ಷೆಗೆ ಅರ್ಹರಾಗಲು ಅಭ್ಯರ್ಥಿಗಳು ಕೆಳಗಿನ ಎಲ್ಲಾ ಸಹಿಷ್ಣುತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಹಾಗೂ ಈ ಕೆಳಗಿನ ಎಲ್ಲಾ ಸಹಿಷ್ಣುತೆ ಪರೀಕ್ಷೆಗಳನ್ನು ಕೆಳಗೆ ನಮೂದಿಸಿರುವ ಕ್ರಮದಲ್ಲಿಯೇ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಈ ಪರೀಕ್ಷೆಗಳಲ್ಲಿ ಭಾಗವಹಿಸದೆ ತಿರಸ್ಕರಿಸುವವರು/ವಿಫಲವಾಗುವರು ಅನರ್ಹತೆಗೆ ಒಳಗಾಗುವರು. ಪ್ರತಿಯೊಂದು ಸಹಿಷ್ಣುತೆ ಪರೀಕ್ಷೆ ಮುಗಿದ ನಂತರ ನಿಗದಿತ ನಮೂನೆಗೆ ಅಭ್ಯರ್ಥಿಯು ಭರ್ತಿ ಮಾಡಿರುವ ವಿವರಗಳನ್ನು ಪರಿಶೀಲಿಸಿ ಸಹಿ ಹಾಕಬೇಕು. ತಪ್ಪಿದಲ್ಲಿ ಅಂತಹ ಅಭ್ಯರ್ಥಿಯು ಅನರ್ಹತೆಗೊಳಗಾಗುವನು, ಸಹಿಷ್ಣುತೆ ಪರೀಕ್ಷೆಗೆ ಅಂಕಗಳನ್ನು ನೀಡಲಾಗುವುದಿಲ್ಲ. ಇವು ಕೇವಲ ಅರ್ಹತೆಗೆ ಮಾತ್ರ ಸೀಮಿತವಾಗಿರುತ್ತವೆ.
  • ಅಭ್ಯರ್ಥಿಗಳು 1600 ಮೀಟರ್‌ ಓಟವನ್ನು 7 ನಿಮಿಷ 30 ಸೆಕೆಂಡುಗಳೊಳಗಾಗಿ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು 400 ಮೀಟರ್ ಓಟವನ್ನು 2 ನಿಮಿಷ 10 ಸೆಕೆಂಡುಗಳೊಳಗಾಗಿ ಪೂರ್ಣಗೊಳಿಸಿದರೆ ಮಾತ್ರ ಮುಂದಿನ ಸಹಿಷ್ಣುತೆ ಪರೀಕ್ಷೆಗೆ ಅರ್ಹಗೊಳ್ಳುವರು. ಇಲ್ಲದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಆ ಹಂತದಲ್ಲಿಯೇ ಅನರ್ಹಗೊಳಿಸಲಾಗುವುದು.
  • ಸಹಿಷ್ಣುತೆ ಪರೀಕ್ಷೆಯಲ್ಲಿ ಎತ್ತರ ಜಿಗಿತ ಅಥವಾ ಉದ್ದ ಜಿಗಿತ ಹಾಗೂ ಗುಂಡೆಸತದಲ್ಲಿ ಮಾತ್ರ ಮೂರು ಅವಕಾಶಗಳನ್ನು ನೀಡಲಾಗುವುದು. ಮೂರು ಅವಕಾಶಗಳಲ್ಲಿ ಉತ್ತಮವಾದ ಒಂದನ್ನು ಮಾತ್ರ ಗಣನೆಗೆ ತೆಗೆದು ಕೊಳ್ಳಲಾಗುವುದು.
ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ
1600 ಮೀ ಓಟ 7 ನಿಮಿಷ 30 ಸೆಕೆಂಡ್ ಮೀರದಂತೆ
ಉದ್ದ ಜಿಗಿತ ಅಥವಾ ಎತ್ತರ ಜಿಗಿತ 3.8 ಮೀಟರ್‌ ಗಿಂತ ಕಡಿಮೆ ಇಲ್ಲದಂತೆ ಅಥವಾ 1.20 ಮೀಟರ್‌ ಗಿಂತ ಕಡಿಮೆ ಇಲ್ಲದಂತೆ ( 3 ಅವಕಾಶಗಳು ಮಾತ್ರ )
ಗುಂಡು ಎಸೆತ ( 7.26 ಕೆ.ಜಿ ) 5.60 ಮೀಟರ್‌ ಗಿಂತ ಕಡಿಮೆ ಇಲ್ಲದಂತೆ ( 3 ಅವಕಾಶಗಳು ಮಾತ್ರ )
 ಮಹಿಳಾ, ಸೇವಾನಿರತ ಮತ್ತು   ಮಾಜಿ ಸೈನಿಕ ಅಭ್ಯರ್ಥಿಗಳಿಗೆ
400 ಮೀ ಓಟ 2 ನಿಮಿಷ  10 ಸೆಕೆಂಡ್ ಮೀರದಂತೆ
ಉದ್ದ ಜಿಗಿತ ಅಥವಾ ಎತ್ತರ ಜಿಗಿತ 2.50 ಮೀಟರ್‌ ಗಿಂತ ಕಡಿಮೆ ಇಲ್ಲದಂತೆ ಅಥವಾ 0.90 ಮೀಟರ್‌ ಗಿಂತ ಕಡಿಮೆ ಇಲ್ಲದಂತೆ ( 3 ಅವಕಾಶಗಳು ಮಾತ್ರ )
ಗುಂಡು ಎಸೆತ (4 ಕೆ.ಜಿ) 3.75 ಮೀಟರ್‌ ಗಿಂತ ಕಡಿಮೆ ಇಲ್ಲದಂತೆ ( 3 ಅವಕಾಶಗಳು ಮಾತ್ರ )

ದೇಹದಾರ್ಢ್ಯತೆ ಪರೀಕ್ಷೆ

ಎಲ್ಲಾ ಸಾಮಾನ್ಯ ಸೇವಾನಿರತ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 168 ಸೆಂ. ಮೀ. ಕಡಿಮೆ ಇಲ್ಲದಂತೆ
ಮಹಿಳೆಯರಿಗೆ 157 ಸೆಂ.ಮೀ.
ಎದೆ ಸುತ್ತಳತೆ (ಪುರುಷ ) 86 ಸೆಂ.ಮೀ. ( ಪೂರ್ತಿ ವಿಸ್ತರಿಸಿದಾಗ ) ಕನಿಷ್ಠ ವಿಸ್ತರಣೆ 5 ಸೆಂ.ಮೀ.
ತೂಕ ( ಮಹಿಳೆಯರಿಗೆ ) 45 ಕೆ. ಜಿ

ಲಿಖಿತ ಪರೀಕ್ಷೆ

ಪೊಲೀಸ್‌ ಸಬ್‌ ಇನ್ಸ್ಪೆಕ್ಟರ್‌ (ವೈರ್ ಲೆಸ್) ಲಿಖಿತ ಪರೀಕ್ಷೆಯು ಪದವಿ ಮಟ್ಟದ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ ;

ಪೇಪರ್ 1 :

ಪ್ರಬಂಧ ಬರಹ, ಸಾರಾಂಶ ಬರಹ, ಭಾಷಾಂತರ ಪ್ರಶ್ನೆಗಳು ಇರುತ್ತವೆ. ಪ್ರಬಂಧ ಬರಹದಲ್ಲಿ 600 ಶಬ್ದಗಳ ಮಿತಿಯನ್ನು ಮೀರಬಾರದು. ಪಬಂಧದ ಜೊತೆ ಸಾರಾಂಶ ಬರಹ (Precis) ಪ್ರಶ್ನೆಯನ್ನೂ ಕೊಡಲಾಗುವುದು. ಅಭ್ಯರ್ಥಿಗಳು ಕೊಡಲಾಗಿರುವ ಉತ್ತರ ಪತ್ರಿಕೆಯಲ್ಲಿ ಉತ್ತರಿಸತಕ್ಕದ್ದು ಹಾಗೂ ಅತಿರಿಕ್ತ ಉತ್ತರ ಪತ್ರಿಕೆಗಳನ್ನು ಕೊಡಲಾಗುವುದಿಲ್ಲ. ಈ ಪರೀಕ್ಷೆಯ ಅವಧಿ ಒಂದು ಗಂಟೆ ಮೂವತ್ತು ನಿಮಿಷಗಳಾಗಿದ್ದು, 50 ಅಂಕಗಳನ್ನು ಹೊಂದಿರುತ್ತದೆ. 20 ಅಂಕಗಳು ಪ್ರಬಂಧಕ್ಕೆ, 10 ಅಂಕಗಳು ಸಾರಾಂಶ ಬರಹಕ್ಕೆ ಹಾಗೂ 20 ಅಂಕಗಳು ಕನ್ನಡದಿಂದ ಇಂಗ್ಲೀಷ್‌ಗೆ ಮತ್ತು ಇಂಗ್ಲೀಷ್‌ನಿಂದ ಕನ್ನಡ ಭಾಷಾಂತರಕ್ಕೆ) ಇದರಲ್ಲಿ ಕನಿಷ್ಠ ಅಂಕಗಳು ಇರುವುದಿಲ್ಲ.
ವಿಷಯ ಅಂಕಗಳು ಸಮಯ
ಪ್ರಬಂಧ (600 ಪದಗಳು ಮೀರದಂತೆ ) 30 ಅಂಕಗಳು 90 ನಿಮಿಷ
ಕನ್ನಡ ಭಾಷೆಯಿಂದ ಇಂಗ್ಲೀಷ್ ಭಾಷೆಗೆ ಭಾಷಾಂತರ ಮತ್ತು ಇಂಗ್ಲೀಷ್ ಭಾಷೆಯಿಂದ ಕನ್ನಡ ಭಾಷೆಗೆ ಭಾಷಾಂತರ 10 ಅಂಕಗಳು ಮತ್ತು 10 ಅಂಕಗಳು
ಸಾರಾಂಶ ಬರಹ(Precis) 10 ಅಂಕಗಳು
ಒಟ್ಟು 50 ಅಂಕಗಳು

ಪೇಪರ್ 2 :

ಈ ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿದ್ದು, ವಸ್ತುನಿಷ್ಟ (Objective) ಮಾದರಿಯದಾಗಿದ್ದು, ಬಹುವಿಧ ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ಜ್ಞಾನ, ಸಾಮಾನ್ಯ ಅಧ್ಯಯನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತೀಯ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ ಮತ್ತು ಸಾಮಾನ್ಯ ಮಾನಸಿಕ ಸಾಮರ್ಥ್ಯ ಮತ್ತು ನೀತಿ ಶಿಕ್ಷಣ ಗಳಿಗೆ ಸಂಬಂಧಪಟ್ಟಿರುತ್ತವೆ. ಇದರಲ್ಲಿ ಹೆಚ್ಚಿನ ಪ್ರಶ್ನೆಗಳು ಎಲೆಕ್ಟ್ರಾನಿಕ್ಸ್ ಒಳಗೊಂಡಂತೆ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದವುಗಳಾಗಿರುತ್ತವೆ. ಈ ಪ್ರಶ್ನೆ ಪತ್ರಿಕೆಗೆ 150 ಅಂಕಗಳಿದ್ದು, ಕನಿಷ್ಟ ಅಂಕಗಳು ಇರುವುದಿಲ್ಲ. ಇದರ ಕಾಲಾವಧಿ ಒಂದೂವರೆ ಗಂಟೆಗಳು, ಪ್ರತಿ ತಪ್ಪು ಉತ್ತರಕ್ಕೆ ಅಂತಹುದೇ ಪ್ರಶ್ನೆಯ ಸರಿ ಉತ್ತರದ ಶೇ. 25 ರಷ್ಟು (0.375) ರಷ್ಟು ಅಂಕಗಳನ್ನು ಕಳೆಯಲಾಗುವುದು. ಅಭ್ಯರ್ಥಿಗಳು ಎರಡು ಪತ್ರಿಕೆಗಳಿಗೂ ಹಾಜರಾಗುವುದು ಕಡ್ಡಾಯವಾಗಿರುತ್ತದೆ.

ಇತ್ತೀಚಿನ ನೇಮಕಾತಿ

ಕರ್ನಾಟಕ ರಾಜ್ಯ ಪೊಲೀಸ್ (KSP) ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ (ವೈರ್ ಲೆಸ್) ಹುದ್ದೆಗಳ ಇತ್ತೀಚಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಕೆಎಸ್‌ಪಿ ಸುಮಾರು 26 ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ (ವೈರ್ ಲೆಸ್)  ಖಾಲಿ ಹುದ್ದೆಗಳನ್ನು ಹೊಂದಿದ್ದು, ಪದವಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿವರ ದಿನಾಂಕ
ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 26/05/2020
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27/07/2020
ಆನ್‌ಲೈನ್‌ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 29/07/2020

ಖಾಲಿ ಇರುವ ಹುದ್ದಗಳ ವಿವರ

ಹುದ್ದೆ –   PSI (WIRELESS) 

ಕಾಯ್ದಿರಿಸಿದ ಹುದ್ದೆಗಳು NKK 
ನೇರ ನೇಮಕಾತಿ ಪುರುಷ 14 
ನೇರ ನೇಮಕಾತಿ ಮಹಿಳೆ 05 
ಸೇವಾನಿರತ ಪುರುಷ 03 
ಸೇವಾನಿರತ ಮಹಿಳೆ 01 
ಮಾಜಿ ಸೈನಿಕ ಪುರುಷ 03 
ಒಟ್ಟು 26 

ಆನ್‌ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ

  • KSP ಯ ಅಧಿಕೃತ ವೆಬ್‌ಸೈಟ್‌ https://ksp-recruitment.in/# ಭೇಟಿ ನೀಡಿ.
  • ಅಧಿಸೂಚನೆಗೆ ಹೋಗಿ ಮತ್ತು ಅನ್ವಯಿಸುವ ಪೋಸ್ಟ್ ಅನ್ನು ಆಯ್ಕೆಮಾಡಿ.
  • New Application’ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಅರ್ಜಿ ನಮೂನೆಯಲ್ಲಿ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು.
  • ಡಾಕ್ಯುಮೆಂಟ್‌ಗಳು / ಪ್ರಮಾಣಪತ್ರಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.
  • ಅರ್ಜಿ ಶುಲ್ಕವನ್ನು ಆನ್‌ಲೈನ್‌ ಅಥವಾ ಅಂಚೆ ಕಛೇರಿ ಚಲನ್‌ ಮೂಲಕ ಪಾವತಿಸಬೇಕು.
  • ಅಂತಿಮವಾಗಿ, ಆನ್‌ಲೈನ್ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಶುಲ್ಕ ವಿವರ

ಪ್ರವರ್ಗ ಪಾವತಿಸಬೇಕಾದ ಶುಲ್ಕ
GM and OBC (2A, 2B, 3A, 3B) Rs. 250
SC, ST and CAT – 01 Rs. 100

ಆರ್ಹತೆಗಳು

ಅಭ್ಯರ್ಥಿಗಳು  ಪ್ರವರ್ಗ  ವಯಸ್ಸಿನ ಮಿತಿಗಳು 
ನೇರ ನೇಮಕಾತಿ ಆಭ್ಯರ್ಥಿಗಳಿಗೆ 
GM  21 – 26 ವರ್ಷಗಳು 
SC,ST, CAT – 012A,2B,3A,3B  21 – 28 ವರ್ಷಗಳು 
ಸೇವಾ ನಿರತ ಅಭ್ಯರ್ಥಿಗಳಿಗೆ
 
GM  35 ವರ್ಷಗಳು 
SC,ST, CAT – 012A,2B,3A,3B  40 ವರ್ಷಗಳು 

2. ಶೈಕ್ಷಣಿಕ ವಿದ್ಯಾರ್ಹತೆ

ಯು.ಜಿ.ಸಿ. ಇಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ / ಎಲೆಕ್ಟ್ರಾನಿಕ್ಸ್ / ಎಲೆಕ್ಟಿಕಲ್ಸ್ / ಕಂಪ್ಯೂಟರ್ ಸೈನ್ಸ್ / ಟೆಲಿ ಕಮ್ಯೂನಿಕೇಷನ್ಸ್ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯುಳ್ಳ ವಿಜ್ಞಾನ ವಿಷಯಗಳಲ್ಲಿನ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ಪಡೆದಿರಬೇಕು. (ಎಸ್‌ಸಿ/ಎಸ್‌ಟಿ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ಶೇ. 45 ರಷ್ಟು ), ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 27/07/2020ಕ್ಕೆ ಹೊಂದಿರಬೇಕು. ( ಮಾಜಿ ಸೈನಿಕ ಅಭ್ಯರ್ಥಿಗಳು ವಿದ್ಯಾರ್ಹತೆಯ ಪ್ರಮಾಣ ಪತ್ರವನ್ನು ದಿನಾಂಕ: 27/07/2020 ರೊಳಗೆ ಹೊಂದಿದ್ದರೆ ಅಂತಹ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ಪರಿಗಣಿಸಲಾಗುವುದು). ಸೇವಾನಿರತ ಅಭ್ಯರ್ಥಿಗಳಿಗೆ ವಿದ್ಯಾರ್ಹತೆ ಮತ್ತು ಅನುಭವ: ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ/ಎಲೆಕ್ಟ್ರಾನಿಕ್ಸ್ /ಎಲೆಕ್ನಿಕಲ್ಸ್ /ಕಂಪ್ಯೂಟರ್ ಸೈನ್ಸ್ /ಟೆಲಿ ಕಮ್ಯೂನಿಕೇಷನ್ಸ್ ವಿಷಯದಲ್ಲಿ ಪದವಿ ಅಥವಾ ತತ್ತಮಾನ ವಿದ್ಯಾರ್ಹತೆಯುಳ್ಳ ವಿಜ್ಞಾನ ವಿಷಯಗಳಲ್ಲಿನ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ಪಡೆದಿರಬೇಕು. (ಎಸ್‌ಸಿ/ಎಸ್‌ಟಿ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ 45%), ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಅಂದರೆ 27/07/2020 ಕ್ಕೆ ಹೊಂದಿರಬೇಕು, ತತ್ಸಮಾನ ಪದವಿ ಜೊತೆಯಲ್ಲಿ ಪೊಲೀಸ್ ಇಲಾಖೆಯ ಯಾವುದೇ ವೃಂದದಲ್ಲಿ 5 ವರ್ಷಗಳ ಕನಿಷ್ಟ ಸೇವೆಯನ್ನು ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ / ಹೆಡ್ ಕಾನ್ಸ್ ಟೇಬಲ್/ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಪೂರ್ಣಗೊಳಿಸಿ ಕರ್ತವ್ಯ ನಿರ್ವಹಿಸುತ್ತಿರಬೇಕು.

ತರಬೇತಿ, ಖಾಯಂಪೂರ್ವ ಅವಧಿ ಮತ್ತು ವೇತನ ಶ್ರೇಣಿ

1. ತರಬೇತಿ

ನೇಮಕಾತಿ ಹೊಂದಿದ ಅಭ್ಯರ್ಥಿಗಳು ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಅಥವಾ ಪೊಲೀಸ್ ತರಬೇತಿ ಕೇಂದ್ರ, ಕಲಬುರಗಿ ಅಥವಾ ಪೊಲೀಸ್ ಇಲಾಖೆಯು ತೀರ್ಮಾನಿಸಿದ ಇತರೆ ತರಬೇತಿ ಕೇಂದ್ರದಲ್ಲಿ ಹನ್ನೆರಡು ತಿಂಗಳ ತರಬೇತಿಯನ್ನು ಪಡೆಯಬೇಕಾಗಿದ್ದು, ತರಬೇತಿಯ ಕೊನೆಯಲ್ಲಿ ನಿಗದಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.

2. ಖಾಯಂಪೂರ್ವ ಅವಧಿ

ಮೂಲ ತರಬೇತಿ ಮತ್ತು ಪ್ರಾಯೋಗಿಕ ತರಬೇತಿ ಸೇರಿದಂತೆ ಎರಡು ವರ್ಷ ಆರು ತಿಂಗಳು.

3. ವೇತನ ಶ್ರೇಣಿ

₹ 37900 – ₹ 70850

LISTS