ವಿಶ್ವ - ಉಗಮ ಮತ್ತು ಸಿದ್ಧಾಂತ

ನಮ್ಮ ಸುತ್ತಲಿನ ವಿಶಾಲವಾದ ಜಾಗವನ್ನು ಬ್ರಹ್ಮಾಂಡ ಅಥವಾ ವಿಶ್ವ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಖಾಲಿ ಜಾಗವಾಗಿದೆ. ಅತ್ಯಂತ ದೂರದ ನಕ್ಷತ್ರಗಳು, ಗ್ರಹಗಳು, ಉಪಗ್ರಹಗಳು, ಹಾಗೆಯೇ ನಮ್ಮ ಸ್ವಂತ ಭೂಮಿ ಮತ್ತು ಅದರ ಮೇಲಿನ ಎಲ್ಲಾ ವಸ್ತುಗಳು ಹೀಗೆ ವಿಶ್ವವು ಅಸ್ತಿತ್ವದಲ್ಲಿರುವ ಎಲ್ಲವನ್ನೂ ಒಳಗೊಂಡಿದೆ.

ವಿಶ್ವ ಉಗಮದ ಪ್ರಮುಖ ಸಿದ್ಧಾಂತಗಳು

1. ನಿಹಾರಿಕಾ ಸಿದ್ದಾಂತ

ಈ ಸಿದ್ಧಾಂತವನ್ನು 1755 ರಲ್ಲಿ ಜರ್ಮನಿಯ ತತ್ವಜ್ಞಾನಿ ಇಮ್ಯಾನುಯೆಲ್ ಕಾಂಟ್ ಅಭಿವೃದ್ಧಿಪಡಿಸಿದರು ಮತ್ತು 1796 ರಲ್ಲಿ ಜರ್ಮನಿಯ ವಿಜ್ಞಾನಿ ಪಿಯರೆ ಲ್ಯಾಪ್ಲೇಸ್ ಅವರು ಮಾರ್ಪಡಿಸಿದರು.

I. ಕಾಂಟ್‌ ರವರ ಸಿದ್ಧಾಂತ

ನ್ಯೂಟನ್‌ನ ಗುರುತ್ವಾಕರ್ಷಣೆಯ ನಿಯಮಗಳ ಆಧಾರದ ಮೇಲೆ ಕಾಂಟ್ ತನ್ನ ನಿಹಾರಿಕಾ ಸಿದ್ಧಾಂತವನ್ನು ಮಂಡಿಸಿದ್ದಾರೆ.
ಪ್ರಮುಖ ಅಂಶಗಳು:
 • ಇಡೀ ಬ್ರಹ್ಮಾಂಡವು ವಸ್ತುವಿನ ನಿಶ್ಚಲವಾದ ಭೌತ ದ್ರವ್ಯದ ಮೋಡದಿಂದ ಆವೃತವಾಗಿತ್ತು.
 • ಇದು ಯಾವುದೇ ಚಲನೆಗಳಿಲ್ಲದೆ ನಿಶ್ಚಲವಾಗಿತ್ತು. ಅವರು ಅದನ್ನು ‘ನಿಹಾರಿಕೆ’ ಎಂದು ಕರೆದರು.
 • ಗುರುತ್ವಾಕರ್ಷಣೆಯ ಬಲದಿಂದಾಗಿ ವಸ್ತುವಿನ ಗಟ್ಟಿಯಾದ ಕಣಗಳು ಪರಸ್ಪರ ಡಿಕ್ಕಿ ಹೊಡೆದವು. ಹೀಗಾಗಿ, ಕಣಗಳ ಘರ್ಷಣೆ ಮತ್ತು ಘರ್ಷಣೆಯೊಂದಿಗೆ ಶಾಖವು ಉತ್ಪತ್ತಿಯಾಗಿ ನಿಹಾರಿಕೆಯಲ್ಲಿ ಚಲನೆಯನ್ನು ಪ್ರಾರಂಭಿಸಿತು.
 • ಕ್ರಮೇಣ ಅನಿಲರಾಶಿಯಲ್ಲಿ ಚಲನೆಯು ಉಂಟಾಗಿ ವೇಗವು ಅಧಿಕಗೊಂಡಿತು. ಕೌನಿಕ ವೇಗವು ಹೆಚ್ಚಿದಂತೆಲ್ಲಾ ಶಾಖವೂ ಹೆಚ್ಚಾಯಿತು. ಅದರ ಪರಿಣಾಮವಾಗಿ ಕಣಗಳ ಸಮೂಹವು ಕ್ರಮೇಣ ಅನಿಲರೂಪವನ್ನು ತಾಳಿತು.
Kant
Nebular Hypothesis
 •  ಇದರ ಹೊರಭಾಗವು ಹೆಚ್ಚು ಸಾಂದ್ರೀಕರಣ ಹೊಂದಿತು. ಕೌನಿಕ ವೇಗ ಹಾಗೂ ಕೇಂದ್ರಾಪಗಮನದ ಶಕ್ತಿಗಳು ಹೆಚ್ಚಾದಂತಲ್ಲಾ ಜ್ಯೋತಿರ್ಮಘದ ಹೊರ ವಲಯವು ಬಳೆಗಳ ರೂಪದಲ್ಲಿ ಹೊರ ದೂಡಲ್ಪಟ್ಟಿತು.
 •  ಹೀಗೆ ಕಳಚಲ್ಪಟ್ಟಿ ಬಳೆಗಳು ಘನೀಕರಣಹೊಂದಿ ಗ್ರಹಗಳಾಗಿ ಪರಿವರ್ತನೆಗೊಂಡವು.
 •  ಇದೇ ರೀತಿಯಾಗಿ ಗ್ರಹಗಳಿಂದ ಹೊರದೂಡಲ್ಪಟ್ಟ ಅನಿಲ ರಾಶಿಯಿಂದ ಉಪಗ್ರಹಗಳು ಉಂಟಾದವು.
 •  ಉಳಿದ ಅನಿಲ ರಾಶಿಯು ಸೂರ್ಯನಾಗಿ ಪರಿಣಮಿಸಿತು. ಹೀಗೆ ಜ್ಯೋತಿರ್ಮಘದ ಸಾಂದ್ರೀಕರಣ ಕ್ರಿಯೆ ಹಾಗೂ ವೇಗದ ಪರಿಣಾಮವಾಗಿ ಸೌರವ್ಯೂಹ ಹಾಗೂ ಅದರೊಡನೆ ಭೂಮಿ ಉಗಮವಾಗಿದೆಯೆಂದು ಕ್ಯಾಂಟ್ ಅಭಿಪ್ರಾಯಪಟ್ಟಿರುವನು.
 •  

II. ಲ್ಯಾಪ್ಲೇಸ್ ರವರ ಸಿದ್ಧಾಂತ

 1. ಲ್ಯಾಪ್ಲೇಸ್ ಸ್ವತಂತ್ರವಾಗಿ 1796 ರಲ್ಲಿ ನಿಹಾರಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದರು.
 2. ಪ್ರಾರಂಭದಲ್ಲೇ ನೈಸರ್ಗಿಕವಾಗಿ ನಿರ್ಮಾಣವಾದ ಅತ್ಯುಷ್ಟ ಹಾಗೂ ಸ್ವಯಂಭ್ರಮಣವುಳ್ಳ ಅನಿಲ ಸಮೂಹವಿದ್ದಿತು. ಇದನ್ನೇ ನಿಹಾರಿಕೆ” ಅಥವಾ “ಜೋತಿರ್ಮೇಘ” (Nebulae) ಎಂದು ಕರೆದರು.
 3. ಇದು ಅಪರಿಮಿತ ಜಲಜನಕ ಸ್ವಲ್ಪ ಮಾತ್ರ ಹೀಲಿಯಂ ಹಾಗೂ ಧೂಳಿನ ಮಿಶ್ರಣದಿಂದ ಕೂಡಿದ್ದಿತು. ನಿಹಾರಿಕೆಯು ಸ್ವಯಂಭ್ರಮಿಸುತ್ತಿದ್ದು, ತಂಪಾಗುತ್ತಾ ಬಂದಂತೆ ಕ್ರಮೇಣ ಸಂಕುಚಿತಗೊಂಡು, ಇನ್ನಷ್ಟು ತ್ವರಿತ ವೇಗದಲ್ಲಿ ಚಲಿಸ ತೊಡಗಿತು.
 4. ಸ್ವಯಂಭ್ರಮಣದ ವೇಗವು ಹೆಚ್ಚಾದಂತೆಲ್ಲ ಕೇಂದ್ರಾಪಗಮನ ಶಕ್ತಿಯೂ ಅತ್ಯಧಿಕಗೊಂಡಿತು. ನಿಹಾರಿಕೆಯ ಗುರುತ್ವಾಕರ್ಷಣ ಶಕ್ತಿಯಿಂದಾಗಿ ವಸ್ತುಗಳು ಅದರ ಕೇಂದ್ರದ ಕಡೆಗೆ ಆಕರ್ಷಿಸಲ್ಪಟ್ಟವು. ಕೇಂದ್ರಾಪಗಮನ ಶಕ್ತಿ ಮತ್ತು ಗುರುತ್ವಾಕರ್ಷಣ ಶಕ್ತಿಗಳೆರಡೂ ಪರಸ್ಪರ ವಿರುದ್ಧವಾದವು.
 5. ನಿಹಾರಿಕೆಯ ಒಳಭಾಗವು ಹೊರಭಾಗದ ವೇಗಕ್ಕೆ ಸಮತೋಲನವಾಗಿ ಚಲಿಸುವುದು ಸಾಧ್ಯವಾಗದಿದ್ದಾಗ ಸಂಕುಚಿತ ಹೊಂದಿದ ಹೊರಭಾಗವು ಬಳೆಗಳ ರೂಪದಲ್ಲಿ ಒಂದಾದ ಮೇಲೊಂದರಂತೆ ಕಳಚಿಕೊಳ್ಳಲ್ಪಟ್ಟವು.
 6. ಈ ಬಳೆಗಳು ಕ್ರಮೇಣ ಘನೀಕರಣಹೊಂದಿ ಗ್ರಹಗಳಾದವು ಉಳಿದ ನಿಹಾರಿಕೆಯ ಕೇಂದ್ರವು ಸಾಂದ್ರೀಕರಣ ಹೊಂದಿ ಅತ್ಯುನ್ನತೆಯುಳ್ಳ ಬೆಳಕಿನ ಕಿರಣಗಳನ್ನು ಹೊರ ಹೊಮ್ಮುವ ಆಕಾಶಕಾಯವಾಗಿ ಉಳಿಯಿತು. ಇದನ್ನೇ ಸೂರ್ಯನೆಂದು ಕರೆಯಲಾಗಿದೆ.
 7. ಅಂತರಿಕ್ಷ ವಲಯದಲ್ಲಿ ಗ್ರಹಗಳು ತಂಪಾಗುವ ದೀರ್ಘ ಪ್ರಕ್ರಿಯೆಯಲ್ಲಿ ಅವುಗಳಿಂದ ಬಳೆಗಳ ರೂಪದಲ್ಲಿ ಹೊರ ದೂಡಲ್ಪಟ್ಟ ವಸ್ತುಗಳು ಸಾಂದ್ರೀಕರಿಸಿ ಉಪಗ್ರಹಗಳಾದವು.
 8. ಸೂರ್ಯನಾಗಿ ಉಳಿದ ನಿಹಾರಿಕೆಯ ಆಕರ್ಷಣೆಯಿಂದಾಗಿ ಗ್ರಹಗಳು ಸೂರ್ಯನ ಸುತ್ತಲೂ, ಗ್ರಹಗಳ ಆಕರ್ಷಣೆಗೊಳಪಟ್ಟು ಉಪಗ್ರಹಗಳು ಗ್ರಹಗಳ ಸುತ್ತಸುತ್ತಲು ಪ್ರಾರಂಭಿಸಿದವೆಂದು ವಿವರಿಸಲಾಗಿದೆ.
 9. ಹೀಗೆ ಸೌರವ್ಯೂಹ ಮತ್ತು ಭೂಮಿ ಉಗಮಗೊಂಡಿವೆಯೆಂದು ಲ್ಯಾಪ್ಟಸ್ ತನ್ನ ಐದು ಸಂಪುಟಗಳ ‘ಟ್ರೇಟೈಸ್ ಆನ್ ಸೆಲೆಸ್ಟ್ರಿಯಲ್ ಮೆಕ್ಯಾನಿಕ್’ ಗ್ರಂಥದಲ್ಲಿ ವಿವರಿಸಿದನು.
Pierre-Simon_de_Laplace

ಪುರಾವೆಗಳು:

 ನೆಬ್ಯುಲಾರ್ ಸಿದ್ಧಾಂತವು 100 ವರ್ಷಗಳಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆ ಮತ್ತು ಇದು ಜನಪ್ರಿಯವಾಗಿತ್ತು ಏಕೆಂದರೆ:
 1. ಎಲ್ಲಾ ಗ್ರಹಗಳ ರಚನೆ ಮತ್ತು ಸಂಯೋಜನೆಯು ಏಕರೂಪವಾಗಿದೆ ಏಕೆಂದರೆ ವಸ್ತುವನ್ನು ಒಂದೇ ಮೂಲದಿಂದ ಪಡೆಯಲಾಗಿದೆ.
 2. ಎಲ್ಲಾ ಗ್ರಹಗಳು ಒಂದೇ ಸಮತಲದಲ್ಲಿ ಮತ್ತು ವೃತ್ತಾಕಾರದ ಕಕ್ಷೆಗಳಲ್ಲಿ ಒಂದೇ ದಿಕ್ಕಿನಲ್ಲಿ ಸೂರ್ಯನ ಸುತ್ತ ಸುತ್ತುತ್ತವೆ.
 3. ಗ್ರಹಗಳು ಸೂರ್ಯನಿಂದ ವಿಭಿನ್ನ ದೂರದಲ್ಲಿವೆ.
 4. ಸೂರ್ಯನು, ಹಾಗೆಯೇ ಭೂಮಿಯ ಒಳಭಾಗವು ತುಂಬಾ ಬಿಸಿಯಾಗಿರುತ್ತದೆ ಏಕೆಂದರೆ ನೀಹಾರಿಕೆಗಳು ತುಂಬಾ ಬಿಸಿಯಾಗಿರುತ್ತವೆ.

ನಿಹಾರಿಕಾ ಸಿದ್ಧಾಂತದ ಟೀಕೆಗಳು

 1. ಉಂಗುರಗಳ ರೂಪದಲ್ಲಿ ಹೊರಹಾಕಲ್ಪಟ್ಟ ವಸ್ತುವು ಗೋಳಾಕಾರದ ಆಕಾರದಲ್ಲಿರುವ ಗ್ರಹಗಳನ್ನು ರೂಪಿಸಲು ಘನೀಕರಣಗೊಳ್ಳಲು ಸಾಧ್ಯವಾಗಲಿಲ್ಲ.
 2. ಸೂರ್ಯನ ತಿರುಗುವಿಕೆಯ ವೇಗವು ತುಂಬಾ ಕಡಿಮೆಯಿರುತ್ತದೆ, ಅಲ್ಲಿ ಒಂದು ಗ್ರಹಗಳು ವೇಗವಾಗಿ ಚಲಿಸುತ್ತವೆ. ನೆಬ್ಯುಲೇರ್ ಸಿದ್ಧಾಂತವು ಈ ವಿರೋಧಾಭಾಸವನ್ನು ವಿವರಿಸಲು ವಿಫಲವಾಗಿದೆ.
 3. ಕೆಲವು ಉಪಗ್ರಹಗಳು ತಮ್ಮ ಗ್ರಹಗಳ ವಿರುದ್ಧ ಚಲಿಸುತ್ತಿವೆ. ಉದಾಹರಣೆ: ಯುರೇನಸ್ ಮತ್ತು ನೆಪ್ಚೂನ್.  ನೆಬ್ಯುಲಾರ್ ಸಿದ್ಧಾಂತದಲ್ಲಿ ಈ ಅಸಂಗತತೆಗೆ ಯಾವುದೇ ವಿವರಣೆಯಿಲ್ಲ.

2. ಮಹಾ ಸ್ಪೋಟ ಸಿದ್ಧಾಂತ

ಬ್ರಹ್ಮಾಂಡದ ಮೂಲದ ಬಗ್ಗೆ ಅತ್ಯಂತ ಜನಪ್ರಿಯ ವಾದವೆಂದರೆ ಮಹಾ ಸ್ಪೋಟ ಸಿದ್ಧಾಂತ (ಬಿಗ್ ಬ್ಯಾಂಗ್ ಸಿದ್ಧಾಂತ).  ಇದನ್ನು ವಿಸ್ತರಿಸುವ ಬ್ರಹ್ಮಾಂಡದ ಕಲ್ಪನೆ ಎಂದೂ ಕರೆಯುತ್ತಾರೆ.  ಎಡ್ವಿನ್ ಹಬಲ್, 1929 ರಲ್ಲಿ, ಬ್ರಹ್ಮಾಂಡವು ವಿಸ್ತರಿಸುತ್ತಿದೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿದರು.  ಆದರೆ 1927 ರಲ್ಲಿ ಬೆಲ್ಜಿಯಂನ ಜಾರ್ಜಸ್‌ ಲೆಮೈತ್ರಿ ಮಹಾ ಸ್ಪೋಟ ಸಿದ್ಧಾಂತದ ಪ್ರತಿಪಾದಕರಾಗಿದ್ದಾರೆ.
ಮಹಾ ಸ್ಪೋಟ ಸಿದ್ಧಾಂತವು ಬ್ರಹ್ಮಾಂಡದ ಬೆಳವಣಿಗೆಯಲ್ಲಿ ಕೆಳಗಿನ ಹಂತಗಳನ್ನು ಪರಿಗಣಿಸುತ್ತದೆ.
 1. ಆರಂಭದಲ್ಲಿ, ಬ್ರಹ್ಮಾಂಡವನ್ನು ರೂಪಿಸುವ ಎಲ್ಲಾ ವಸ್ತುವು ಒಂದು ಸ್ಥಳದಲ್ಲಿ “ಅಣು” ರೂಪದಲ್ಲಿ ಊಹೆಗೂ ಮೀರಿದ ಸಣ್ಣ ಪರಿಮಾಣ, ಅನಂತ ತಾಪಮಾನ ಮತ್ತು ಅನಂತ ಸಾಂದ್ರತೆಯೊಂದಿಗೆ ಅಸ್ತಿತ್ವದಲ್ಲಿತ್ತು.
 2. ಮಹಾಸ್ಪೋಟದಲ್ಲಿ “ಸಣ್ಣ ಆಣು” ಹಿಂಸಾತ್ಮಕವಾಗಿ ಸ್ಫೋಟಿಸಿತು. ಇದು ದೊಡ್ಡ ವಿಸ್ತರಣೆಗೆ ಕಾರಣವಾಯಿತು.  ಮಹಾಸ್ಫೋಟದ ಘಟನೆಯು  7 ಶತಕೋಟಿ ವರ್ಷಗಳ ಹಿಂದೆ ಸಂಭವಿಸಿದೆ ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ.  ಇಂದಿನವರೆಗೂ ವಿಸ್ತರಣೆ ಮುಂದುವರಿದಿದೆ.  ಅದು ಬೆಳೆದಂತೆ ಸ್ವಲ್ಪ ಶಕ್ತಿಯು ವಸ್ತುವಾಗಿ ಪರಿವರ್ತನೆಯಾಯಿತು.  ಸ್ಪೋಟದ ನಂತರ ಒಂದು ಸೆಕೆಂಡಿನ ಭಿನ್ನರಾಶಿಗಳಲ್ಲಿ ನಿರ್ದಿಷ್ಟವಾಗಿ ತ್ವರಿತವಾದ ವಿಸ್ತರಣೆ ಕಂಡುಬಂದಿತು.  ನಂತರ ವಿಸ್ತರಣೆ ನಿಧಾನವಾಯಿತು.  ಬಿಗ್ ಬ್ಯಾಂಗ್ ಘಟನೆಯಿಂದ ಮೊದಲ ಮೂರು ನಿಮಿಷಗಳಲ್ಲಿ, ಮೊದಲ ಪರಮಾಣು ರೂಪುಗೊಳ್ಳಲು ಪ್ರಾರಂಭಿಸಿತು.
 3. ಮಹಾಸ್ಪೋಟವಾದ 3 ಲಕ್ಷ ವರ್ಷಗಳ ನಂತರ ತಾಪಮಾನವು 4,500K (ಕೆಲ್ವಿನ್) ನಷ್ಟು ಕಡಿಮೆಯಾಗಿ ಅಣು ಸೃಷ್ಟಿಯಾಗಿ ಬ್ರಹ್ಮಾಂಡವು ಪಾರದರ್ಶಕವಾಯಿತು.

3. ಉಬ್ಬರವಿಳಿತ ಸಿದ್ಧಾಂತ

 1. ಸೌರವ್ಯೂಹದ ಉಗಮವನ್ನು ವಿವರಿಸುವ ಉಬ್ಬರವಿಳಿತ ಸಿದ್ಧಾಂತವನ್ನು ಸರ್ ಜೇಮ್ಸ್ ಜೀನ್ಸ್ 1919 ರಲ್ಲಿ ಹಾಗೂ ಹೆರಾಲ್ಡ್ ಜೆಫ್ರೀಸ್ ರವರು 1926 ರಲ್ಲಿ ಪ್ರತಿಪಾದಿಸಿದರು.
 2. ಈ ಸಿದ್ಧಾಂತದ ಪ್ರಕಾರ ಪ್ರಾರಂಭದಲ್ಲಿ ಸೂರ್ಯನು ಅಗಾಧವಾದ ಅನಿ ರಾಶಿಯಾಗಿದ್ದು ಯಾವುದೇ ಗ್ರಹಗಳನ್ನು ಹೊಂದಿರಲಿಲ್ಲ. ಈ ಸ್ಥಿತಿಯಲ್ಲಿ ಸೂರ್ಯನಿಗಿಂತ ಅನೇಕ ಪಟ್ಟು ದೊಡ್ಡದಾದ ಮತ್ತೊಂದು ನಕ್ಷತ್ರವು ಅದರ ಸಮೀಪಕ್ಕೆ ಬಂದಿತು. ಅದರ ಗುರುತ್ವಾಕರ್ಷಣೆಯಿಂದ ಸೂರ್ಯನ ಅನಿಲರಾಶಿಯಲ್ಲಿ ಉಬ್ಬರವುಂಟಾಯಿತು. ಬೃಹತ್ ನಕ್ಷತ್ರವು ತನ್ನ ಮಾರ್ಗದಲ್ಲಿ ಮುಂದುವರಿದ ನಂತರ, ಕಳಚಲ್ಪಟ್ಟ ಅನಿಲರಾಶಿಯು (filament) ಸೂರ್ಯನ ಆಕರ್ಷಣೆಗೆ ಒಳಪಟ್ಟು ಅದರ ಸುತ್ತಲೂ ಪರಿಭ್ರಮಿಸಲಾರಂಭಿಸಿತು.
 3. ಸೂರ್ಯನಿಂದ ಕಳಚಲ್ಪಟ್ಟ ಅನಿಲದ ರಾಶಿಯು ಕೇಂದ್ರದಲ್ಲಿ ದೊಡ್ಡದಾಗಿದ್ದು ಅದರ ಎರಡೂ ಬಾಹುಗಳು ಚಿಕ್ಕದಾಗಿದ್ದವು. ಹೀಗೆ ಅದು ಚುಟ್ಟದ ಆಕಾರದಲ್ಲಿದ್ದಿತು. ಈ ಅನಿಲ ರಾಶಿಯು ಘನೀಕರಣ ಹೊಂದಲು ಆರಂಭಿಸಿ ಅಲ್ಲಲ್ಲಿ ಗಂಟುಗಳಂತೆ ಸೂರ್ಯನ ಸುತ್ತಲೂ ಸುತ್ತಲು ಆರಂಭಿಸಿತು.
 4. ಕಾಲಕ್ರಮೇಣ ಅನಿಲದ ರಾಶಿಯು ತಂಪಾಗಿ, ಘನೀಕರಿಸಲ್ಪಟ್ಟು ಗ್ರಹಗಳು ಉಗಮ ಹೊಂದಿದವು. ಈ ಅವಧಿಯಲ್ಲಿ ಸೂರ್ಯನ ಆಕರ್ಷಣೆಗೆ ಒಳಪಟ್ಟು ಗ್ರಹಗಳ ಅನಿಲರಾಶಿಯಲ್ಲಿ ಉಬ್ಬರ ಗಳುಂಟಾಗಿ, ಅದರಿಂದ ಉಪಗ್ರಹಗಳು ನಿರ್ಮಿತಗೊಂಡಿವೆಯೆಂದು ಈ ಸಿದ್ಧಾಂತವು ಪ್ರತಿಪಾದಿಸುವುದು.

4. ದ್ವಿ ನಕ್ಷತ್ರ ಸಿದ್ಧಾಂತ

 1. ಈ ಸಿದ್ಧಾಂತವು ಹೆಚ್. ಎನ್. ರಸೆಲ್ ಮತ್ತು ಆರ್. ಎ. ಲಿಟ್ಸ್ಟನ್ ಎಂಬುವರಿಂದ 1936 ರಲ್ಲಿ ಪ್ರತಿಪಾದಿಸಲ್ಪಟ್ಟಿದೆ.
 2. ಇವರ ಪ್ರಕಾರ ಸೂರ್ಯನು ಆರಂಭದ ಹಂತದಲ್ಲಿ ಎರಡು ನಕ್ಷತ್ರಗಳ ಅಂಗವಾಗಿದ್ದಿತು. ಸೂರ್ಯನೊಡನೆ ಮತ್ತೊಂದು ನಕ್ಷತ್ರವಿದ್ದಿತು. ಇದನ್ನೇ ದ್ವಿ, ನಕ್ಷತ್ರ ಅಥವಾ ಯುಗ್ಮ ತಾರೆಯೆಂದು ಕರೆದಿರುವರು.
 3. ವಿಶ್ವದಲ್ಲಿ ಇಂತಹ ದ್ವಿ ನಕ್ಷತ್ರಗಳು ಹಲವಾರು ಕಂಡುಬರುತ್ತವೆ. ಸೂರ್ಯನ ಸಂಗಾತಿ ನಕ್ಷತ್ರದ ಸಮೀಪಕ್ಕೆ ಆಕಸ್ಮಿಕವಾಗಿ ಬೇರೊಂದು ಆಗಂತುಕ ನಕ್ಷತ್ರವು ಬಂದಿತು. ಈ ನಕ್ಷತ್ರದ ಆಕರ್ಷಣೆಗ ಒಳಪಟ್ಟು, ಸಂಗಾತಿ ನಕ್ಷತ್ರದ ಮೇಲೆಯಲ್ಲಿ ಉಬ್ಬರ ಉಂಟಾದವು. ಸೂರ್ಯನು ಇನ್ನೂ ಬಹುದೂರದಲ್ಲಿದ್ದುದರಿಂದ ಆಗಂತುಕ ನಕ್ಷತ್ರದ ಆಕರ್ಷಣೆಗೆ ಒಳಗಾಗಲಿಲ್ಲ. ನಂತರ ಉಬ್ಬರವು ಸಂಗಾತಿ ನಕ್ಷತ್ರದಿಂದ ಕಳಚಲ್ಪಟ್ಟು, ಅದರ ಸುತ್ತ ಸುತ್ತಲು ಪ್ರಾರಂಭಿಸಿ ಗ್ರಹಗಳುಂಟಾದವು.
 4. ಆ ಎರಡು ನಕ್ಷತ್ರಗಳೂ ಸೂರ್ಯನಿಂದ ದೂರ ಸರಿದ ಮೇಲೆ ಗ್ರಹಗಳು ಸೂರ್ಯನ ಆಕರ್ಷಣೆಗೆ ಒಳಪಟ್ಟು ಅದರ ಸುತ್ತ ಸುತ್ತಲೂ ಪ್ರಾರಂಭಿಸಿದವು. ಸಂಗಾತಿ ನಕ್ಷತ್ರದಿಂದ ಕಳಚಿಕೊಂಡಾಗ ಉಬ್ಬರಗಳು ದ್ರವರೂಪದಲ್ಲಿದ್ದವೆಂದೂ ನಂತರ ಅವು ಸಾಂದ್ರೀಕರಣವಾದವೆಂದು ಹೇಳಲಾಗಿದೆ.
 5. ಈ ಸಿದ್ಧಾಂತವು ಹೆಚ್. ಎನ್. ರಸೆಲ್ ಮತ್ತು ಆರ್. ಎ. ಲಿಟ್ಸ್ಟನ್ ಎಂಬುವರಿಂದ 1936 ರಲ್ಲಿ ಪ್ರತಿಪಾದಿಸಲ್ಪಟ್ಟಿದೆ.
 6. ಇವರ ಪ್ರಕಾರ ಸೂರ್ಯನು ಆರಂಭದ ಹಂತದಲ್ಲಿ ಎರಡು ನಕ್ಷತ್ರಗಳ ಅಂಗವಾಗಿದ್ದಿತು. ಸೂರ್ಯನೊಡನೆ ಮತ್ತೊಂದು ನಕ್ಷತ್ರವಿದ್ದಿತು. ಇದನ್ನೇ ದ್ವಿ, ನಕ್ಷತ್ರ ಅಥವಾ ಯುಗ್ಮ ತಾರೆಯೆಂದು ಕರೆದಿರುವರು.
 7. ವಿಶ್ವದಲ್ಲಿ ಇಂತಹ ದ್ವಿ ನಕ್ಷತ್ರಗಳು ಹಲವಾರು ಕಂಡುಬರುತ್ತವೆ. ಸೂರ್ಯನ ಸಂಗಾತಿ ನಕ್ಷತ್ರದ ಸಮೀಪಕ್ಕೆ ಆಕಸ್ಮಿಕವಾಗಿ ಬೇರೊಂದು ಆಗಂತುಕ ನಕ್ಷತ್ರವು ಬಂದಿತು. ಈ ನಕ್ಷತ್ರದ ಆಕರ್ಷಣೆಗ ಒಳಪಟ್ಟು, ಸಂಗಾತಿ ನಕ್ಷತ್ರದ ಮೇಲೆಯಲ್ಲಿ ಉಬ್ಬರ ಉಂಟಾದವು. ಸೂರ್ಯನು ಇನ್ನೂ ಬಹುದೂರದಲ್ಲಿದ್ದುದರಿಂದ ಆಗಂತುಕ ನಕ್ಷತ್ರದ ಆಕರ್ಷಣೆಗೆ ಒಳಗಾಗಲಿಲ್ಲ. ನಂತರ ಉಬ್ಬರವು ಸಂಗಾತಿ ನಕ್ಷತ್ರದಿಂದ ಕಳಚಲ್ಪಟ್ಟು, ಅದರ ಸುತ್ತ ಸುತ್ತಲು ಪ್ರಾರಂಭಿಸಿ ಗ್ರಹಗಳುಂಟಾದವು.
 8. ಆ ಎರಡು ನಕ್ಷತ್ರಗಳೂ ಸೂರ್ಯನಿಂದ ದೂರ ಸರಿದ ಮೇಲೆ ಗ್ರಹಗಳು ಸೂರ್ಯನ ಆಕರ್ಷಣೆಗೆ ಒಳಪಟ್ಟು ಅದರ ಸುತ್ತ ಸುತ್ತಲೂ ಪ್ರಾರಂಭಿಸಿದವು. ಸಂಗಾತಿ ನಕ್ಷತ್ರದಿಂದ ಕಳಚಿಕೊಂಡಾಗ ಉಬ್ಬರಗಳು ದ್ರವರೂಪದಲ್ಲಿದ್ದವೆಂದೂ ನಂತರ ಅವು ಸಾಂದ್ರೀಕರಣವಾದವೆಂದು ಹೇಳಲಾಗಿದೆ.
Binary star