ಗ್ರೂಪ್ - ಸಿ ಪಠ್ಯಕ್ರಮ
ಕರ್ನಾಟಕ ಲೋಕಸೇವಾ ಆಯೋಗವು (KPSC) ಹಲವಾರು ಗ್ರೂಪ್ C ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಿಕೊಳ್ಳುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ, ಪಠ್ಯಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಕಲಿಕೆಯ ರೀತಿಯಲ್ಲಿ ಮುಂದುವರಿಯಲು ಪಠ್ಯಕ್ರಮವು ದಿಕ್ಸೂಚಿಯಂತೆ ಕಾರ್ಯನಿರ್ವಹಿಸುತ್ತದೆ. ಅಭ್ಯರ್ಥಿಯು ಭೇದಿಸಲು ಬಯಸುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಸರಿಯಾದ ವಿಧಾನ ಮತ್ತು ತಂತ್ರವು ಕೀಲಿಯಾಗಿರುತ್ತದೆ. ಯಾವುದೇ ಆಕಾಂಕ್ಷಿಗಳಿಗೆ ಪಠ್ಯಕ್ರಮದ ಬಗ್ಗೆ ಉತ್ತಮ ಮಾರ್ಗದರ್ಶನದ ಅವಶ್ಯಕೆತೆ ಇರುತ್ತದೆ. ಆದ್ದರಿಂದ ಡಾ ರಾಜ್ ಕುಮಾರ್ ಲರ್ನಿಂಗ್ ಅಪಲಿಕೇಷನ್ ಕೆ.ಪಿ.ಎಸ್.ಸಿ ಗ್ರೂಪ್ ಸಿ ಹುದ್ದೆಗಳ ಪಠ್ಯಕ್ರಮವನ್ನು ಸರಳವಾಗಿ ವಿವರಿಸಿದೆ.